ರೈನ್ಬೋ ರಿಶ್ತಾ
ರೈನ್ಬೋ ರಿಶ್ತಾ ಒಂದು ರೊಮ್ಯಾಂಟಿಕ್ ಸಾಕ್ಷ್ಯಚಿತ್ರ ಸರಣಿಯಾಗಿದ್ದು, ಭಾರತದಾದ್ಯಂತ ಪ್ರೀತಿಯನ್ನು ಹುಡುಕುವ ಮತ್ತು ಆಚರಿಸುವ ಕುರಿತಾದ ಎಲ್ಜಿಬಿಟಿಕ್ಯು+ ಕಥೆಗಳನ್ನು ಇದು ಬಿಂಬಿಸುತ್ತದೆ. ಈ ಕಥೆಗಳು ಮಂಗಳಮುಖಿಯನ್ನು ಡೇಟ್ ಮಾಡುವುದು, ಅಪರೂಪದ ರೈನ್ಬೋ ವಿವಾಹವನ್ನು ಯೋಜಿಸುವುದು, ಯುವ ಸಲಿಂಗಿ ಸ್ತ್ರೀ ದಂಪತಿಯಾಗಿ ಬಾಡಿಗೆಗೆ ಮನೆಯನ್ನು ಹುಡುಕುವುದು ಹಾಗೂ ಸಲಿಂಗಿ ಪುರುಷ ದಂಪತಿಯಾಗಿ ದೀರ್ಘಕಾಲಿಕ ಸಂಬಂಧ ಹೊಂದಲು ಯತ್ನಿಸುವ ಕುರಿತಾಗಿವೆ.
